O Hudugi!
ಓ ಹುಡುಗಿ, ಕಿಟಿಕಿ ಆಚೆ ನೋಡಿದರೆ ಸಾಕು,
ಹೃದಯ ನುಡಿಯತ್ತೆ ನೀನು ಅಲ್ಲಿ ಇರಬೇಕು,
ಸುತ್ತ ಕಪ್ಪು ಆಕಾಶದಿ ಮಿನುಗೋ ತಾರೆ,
ಇತ್ತ ಕೂಗಿ ಕರೆದಿರುವೆ ಎದುರು ನೀ ಬಾರೆ,
ಕೈಗಳು ಒಂಟಿ ಆಗಿವೆ ಏಕೋ ಇಂದು,
ಜಂಟಿ ಮಾಡು ಸನಿಹಕೆ ನೀನು ಬಂದು,
ನಿನ್ನ ಸ್ಪರ್ಶಕೆ ಕಾಯುತಿದೆ ಈ ಮನ,
ವೇದನೆಯಲ್ಲಿ ಮುಳುಗಿದೆ ಮೈಮನ ಈದಿನ,
ಇದು ಪ್ರೀತಿಯ ಕವನವೂ ಅಲ್ಲ,
ಹಾಡಲು ಇದು ಹಾಡೂ ಅಲ್ಲ,
ಹೇಳಲು ಇಷ್ಟವಾಗಿದೆ ಈ ಮಾತುಗಳು,
ಕೇಳಲು ನೀ ಸಿದ್ದವಾಗು ಈ ಸ್ವರಗಳು,
ಭೂಮಿಯಲ್ಲಿ ಏನೇ ಸಿಗಲಿ, ಎಲ್ಲಿ ಏನೇ ಇರಲಿ,
ನನ್ನ ಪ್ರೀತಿಯಂತೆ ಸದಾ ನಿನ್ನ ಬಳಿ ಬರಲಿ,
ನಾ ಇಲ್ದಿದ್ರೂ ಈ ಮನಸ್ಸು ಬಡಿಯುವುದು,
ನಿನಗಾಗಿಯೇ ಸದಾ ಮಿಡಿಯುವುದು.. ಸದಾ ಮಿಡಿಯುವುದು......